ವಿಷಯಕ್ಕೆ ಹೋಗು

ಹುಕ್ಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಕ್ಕಾ ಸೇದುತ್ತಿರುವ ಒಬ್ಬ ವ್ಯಕ್ತಿ

ಹುಕ್ಕಾ (ಗುಡಗುಡಿ) ಸುವಾಸನೆಯುಕ್ತ ತಂಬಾಕು, ಅಥವಾ ಕೆಲವೊಮ್ಮೆ ಗಾಂಜಾ ಅಥವಾ ಅಫೀಮನ್ನು ಬಾಷ್ಪೀಕರಿಸಿ ಸೇದುವ ಒಂದು ಏಕ ಅಥವಾ ಬಹು ವಿಭಾಗಳುಳ್ಳ ಉಪಕರಣ. ಸೇದುವ ಮುನ್ನ ಇವುಗಳ ಧೂಮ/ಹೊಗೆಯನ್ನು ಹಲವುವೇಳೆ ಗಾಜು ಆಧಾರಿತ ನೀರಿನ ಪಾತ್ರೆಯ ಮೂಲಕ ಸಾಗಿಸಲಾಗುತ್ತದೆ.[]

ಹುಕ್ಕಾದ ಮೂಲಕ ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಅಪಾಯಗಳಲ್ಲಿ ನೀರಿನಿಂದ ಶೋಧನೆಯಾಗದ ವಿಷಕಾರಿ ರಾಸಾಯನಿಕಗಳಿಗೆ ಒಡ್ಡಿಕೆ ಮತ್ತು ಹುಕ್ಕಾಗಳನ್ನು ಹಂಚಿಕೊಳ್ಳಲಾದಾಗ ಸಾಂಕ್ರಾಮಿಕ ರೋಗದ ಅಪಾಯ ಸೇರಿವೆ.

ಹುಕ್ಕಾದ ಹುಟ್ಟಿಗೆ ಸಂಬಂಧಿಸಿದಂತೆ ಎರಡು ಸಿದ್ಧಾಂತಗಳಿವೆ. ಮೊದಲನೆಯದೆಂದರೆ ಜೆಸುಟರು ಮಧ್ಯಕಾಲೀನ ಭಾರತಕ್ಕೆ ತಂಬಾಕುವನ್ನು ಪರಿಚಯಿಸಿದ ನಂತರ, ಅಕ್ಬರ್‌ನ ಒಬ್ಬ ವೈದ್ಯನಾಗಿದ್ದ ಅಬುಲ್ ಫ಼ತ್ ಗಿಲಾನಿ ತಂಬಾಕಿನ ಚಿಲುಮೆಯನ್ನು ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ಫತೇಪುರ್ ಸಿಕ್ರಿಯಲ್ಲಿ ಆವಿಷ್ಕರಿಸಿದನು. ಭಾರತೀಯ ಉಪಖಂಡದಿಂದ ಹುಕ್ಕಾ ನಿಕಟಪ್ರಾಚ್ಯಕ್ಕೆ ಹರಡಿತು ಮತ್ತು ಅಲ್ಲಿ ಇದರ ಪ್ರಕ್ರಿಯೆಯನ್ನು ಮಾರ್ಪಡಿಸಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. The cyclopaedia of India and of Jordan and eastern and southern Asia, Volume 2. Bernard Quaritch. 1885. Retrieved 2007-08-01. HOOKAH. Hindi. The Indian pipe and apparatus for smoking.